ಮಂಡೋದರಿಯ ಮಂಡೆ
ಮಂಡೋದರಿ ರಾವಣನ ಹೆಂಡತಿ. ತನ್ನ ಗಂಡ ಬೇರೆ ಹೆಂಗಸನ್ನು ಇಷ್ಟಪಟ್ಟು ಅವಳನ್ನು ಲಪಟಾಯಿಸಿ ತಂದು ಅಶೋಕ ವನದಲ್ಲಿ ಇಟ್ಟಾಗಲೂ ಏನೂ ಮಾಡಲು ಸಾಧ್ಯವಾಗದ ಹೆಂಗಸು. ಏಕೆ ಮಂಡೋದರಿ ಏನೂ ಅರಿಯದ ಮಂದ ಬುಧ್ಧಿಯವಳೇ ?
ಮಂಡೋದರಿ ಬಹಳ ಸುಂದರಿ ಎಂದು ರಾಮಾಯಣ ವಿವರಿಸುತ್ತದೆ. ಇಷ್ಟು ಸುಂದರಿಯಾದ ಹೆಂಡತಿಯನ್ನು ಬಿಟ್ಟು ಪರ ಸಂಗ ಮಾಡ ಬೇಕಾದ ಹಣೆ ಬರಹ ರಾವಣನಿಗೇಕೆ ಬಂತು? ಅವನ ಕಚ್ಚೆ ಹರುಕುತನವೇ ? ಅಥವಾ ಮಂಡೋದರಿ ಹಾಸಿಗೆಯಲ್ಲಿ ಅವನೊಂದಿಗೆ ಸಹಕರಿಸುತ್ತಿರಲಿಲ್ಲವೇ? ಈಗಿನ ಕಾಲದ ಸೊಸೈಟಿ ಹೆಂಗಸರಂತೆ ಕೇವಲ ಅಲಂಕಾರ ಮಾಡಿಕೊಂಡು ಸುತ್ತುವ ಬಸವನಂತೆ ಗೊತ್ತು ಗುರಿಯಿಲ್ಲದವಳೇ ಮಂಡೋದರಿ? ಪ್ರಶ್ನೆಗಳು ಸಾವಿರವಿದ್ದರೂ ಉತ್ತರವಿಲ್ಲ. ವಾಲ್ಮೀಕಿ ಎಲ್ಲ ವಿಷಯಕ್ಕೂ ಉತ್ತರ ಕೊಟ್ಟರೂ ಈ ವಿಷಯದಲ್ಲಿ ಮೌನವೇಕಾದ? ಅವನಿಗೂ ಮನೆಯಲ್ಲಿ ಸಮಸ್ಯೆಗಳಿದ್ದವೆ?
|